Sathyam Shivam Sundarm
ಮುನ್ನುಡಿ ‘ಸತ್ಯಂ ಶಿವಂ ಸುಂದರಮ್’- ಎಂಬ ಕಿರು ಹೊತ್ತಿಗೆಯನ್ನು ಪ್ರೊ|| ಕೆ.ವಿ. ನಾರಾಯಾಯಣ ಮೂರ್ತಿಯವರು ತುಂಬ ಆಸ್ತೆಯನ್ನು ವಹಿಸಿ ಬರೆದಿದ್ದಾರೆ. ಈ ಕೃತಿಯ ಹಿಂದೆ ಅವರಲ್ಲಿ ಹಡಗಿರುವ ಶಿವನ ಮೇಲಿರುವ ಭಕ್ತಿ ಶ್ರದ್ಧೆಗಳು ಪ್ರಖರವಾಗಿ ಗೋಚರಿಸುತ್ತವೆ. ವಯೋವೃದ್ಧರು-ಜ್ಞಾನವೃದ್ಧರೂ ಆದ ಲೇಖಕರ ಈ ಪ್ರಯತ್ನವು ಸಹೃದಯರಲ್ಲಿ ಶಿವಭಕ್ತಿಯ ಬೀಜವನ್ನು ಬಿತ್ತುವ ತವಕದಲ್ಲಿ ನಿರತವಾಗಿರುವುದು ಸ್ವಾಗತಾರ್ಹ. ಶಿವ ಸ್ವರೂಪದಲ್ಲಿ ತಾವು ಕಂಡುಕೊAಡ ‘ಶಿವತತ್ವದ ಸಾರಸದೃಶಗಳನ್ನು ಸರಳವಾಗಿ ಪರಿಚಯಿಸುವ ಪ್ರಯತ್ನದಲ್ಲಿ ಸಫಲರಾಗಿದ್ದಾರೆಂದು ಹೇಳುವುದಕ್ಕೆ “ಸತ್ಯಂ ಶಿವಂ ಸುಂದರಮ್”-ಕೃತಿಯು ಸಾಕ್ಷಿಯಾಗಿ ನಿಲ್ಲುತ್ತದೆ. ಅಷ್ಟೇ ಅಲ್ಲ ಅವರ ಭಾವಗಳ/ ಕಲ್ಪನೆಗಳ ಸಾಕಾರರೂಪವಾಗಿ ಪ್ರತಿಬಿಂಬಿಸುತ್ತಿದೆ. ಹೀಗಾಗಿಯೇ ಈ ಕೃತಿಯು ಭಕ್ತನ ಭಕ್ತಿಯ ಬೆಳವಣಿಗೆಯನ್ನು ಸಾಧಿಸುವ ಹಂತದಲ್ಲಿ ಮಾರ್ಗದರ್ಶಿ ಅಥವಾ ಭಕ್ತನಿಗೊಂದು ಕೈಪಿಡಿಯಾಗಬಲ್ಲದು. ಈ ಹಿನ್ನೆಲೆಯಲ್ಲಿ ಅವರ ಬರವಣಿಗೆಯು ‘ಭಕ್ತನೊಬ್ಬನ ಧಾರ್ಮಿಕ ಸನ್ನೆಡೆ ಯೊಂದನ್ನು, ಮತ್ತು ತಾನು ವಾಸಿಸುವ ಸಮಾಜವನ್ನು ಹೇಗೆ ಆರೋಗ್ಯಕರವಾಗಿ ಮಾರ್ಪಡಿಸಬಲ್ಲುದು’ ಎಂಬ ಮಾರ್ಮಿಕತೆಯನ್ನು ಪ್ರತಿಪಾದಿಸಿದೆ.! ಹೀಗಾಗಿ ‘ವಿಷಯದ ಬಾಹುಳ್ಯತೆಯು ತೀಕ್ಷ÷್ಣವಾಗಿರಲಿ ಅಥವಾ ಸರಳವಾಗಿರಲಿ-ಮುಖ್ಯವಾಗಿ, ಬರವಣಿಗೆಯು ಆ ಭಾವದ ಮಾಧ್ಯಮವಾಗಬೇಕು..’.! ಶ್ರೀಮಶ್ಚಂಕರ ಭಗವತ್ಪಾದರು ಲೋಕದಲ್ಲಿ ಭಗವಂತನ ಸ್ವರೂಪವನ್ನು ಕಾಣುವ ಸಂದರ್ಭದಲ್ಲಿ ವಿಶಾಲ ದೃಷ್ಟಿಯನ್ನು ಬೀರಿದ್ದಾರೆ. ಅದೆಂದರೆ. “ಆಕಾಶಾತ್ಪತಿತA ತೋಯಂ ಯಥಾಗಛ್ಛತಿ ಸಾಗರಮ್ | ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಛ್ಛತಿ || ಆಕಾಶದಿಂದ ನೀರಿನ ಬಿಂದುವಾಗಿ ಭೂಮಿಗೆ ಬಿದ್ದು ಬಿಂದುಗಳ ಸಮಷ್ಟಿಯಲ್ಲಿ ಅಬೇಧ್ಯರೂಪವಾಗಿ ತನ್ನ ಅಸ್ತಿತ್ವವನ್ನು ಸಾಧಿಸಿ ಹರಿವ ನೀರಿನಂತಾಗಿ ಸಮುದ್ರವನ್ನು ಸೇರುತ್ತದೆ. ಅದರಂತೆ, ದೈವಸ್ವರೂಪವೂ ಕೂಡ ಅನಂತ ರೂಪಗಳನ್ನು ಹೊಂದಿರುವುದು. ಅದರ ಚಿಂತೆ ನಮಗೆ ಬೇಡ. ಅಣು-ರೇಣು-ಕಣಗಳ ಸ್ವರೂಪವು ವ್ಯಷ್ಟಿಯಾದರೇನು? ಸಮಷ್ಟಿಯಾದರೇನು? ಆ ಅಂಶವೆಲ್ಲವೂ ನಾವು ನಂಬಿದ ದೈವಾಂಶವೇ ಆದಲ್ಲಿ ಭಿನ್ನಭಾವವೇಕೆ? ಎಂದು ಪ್ರಶ್ನಿಸಿಕೊಳ್ಳುತ್ತಾ, ಆ ಅಣು-ರೇಣು-ಕಣಗಳಲ್ಲಿ ವಿರಾಡ್ರೂಪವಾಗಿಯೋ-ಸೂಕ್ಷö್ಮರೂಪವಾಗಿಯೊ- ಅಡಗಿರುವ ಆ ದೈವಾಂಶಕ್ಕೆ/ದೈವಾAಶಗಳಿಗೆ-ಇನ್ನೂ ಮುಂದುವರಿಸಿ ಹೇಳುವುದಾದರೆ, ಆಚಾರ್ಯರು ಹೇಳುವಂತೆ “ಸರ್ವದೇವ ನಮಸ್ಕಾರಃ” ಎಂದು ಒಪ್ಪಿ ಕೇಶವನ ಪ್ರತಿರೂಪವೆಂಬAತೆ ಸಾಗುತ್ತಿದೆ. ಅದಕ್ಕೆ ನಾನು ನಮಸ್ಕರಿಸುತ್ತೇನೆ-ಎಂದು ಹೇಳಿರುವುದು ಮಹದುತ್ತಮವೆನಿಸುತ್ತದೆ. ಅದನ್ನು ಮೀರುವುದೆಂದರೆ, ಪ್ರಕೃತಿಯನ್ನು ಮೀರಿದಂತೆ..! ಅಂದರೆ, ನಮ್ಮ ಮಿತಿಯನ್ನು ಮಿರಿದ ಇನ್ನೊಂದು ಶಕ್ತಿಯಿದೆ. ಅದರ ರೂಪ-ವಿರೂಪಗಳು ಅಸಂಖ್ಯಾತ. ಅವುಗಳ ಸಾಕಾರರೂಪವನ್ನು ತನ್ನ ಕಣ್ಣಳತೆಗೆ ತಂದುಕೊಳ್ಳುವುದು-ದಾರ್ಶನಿಕ/ಜ್ಞಾನಿ/ವಿದ್ವಾAಸ/ಕಲೆಗಾರ/ಭಕ್ತನ ಮಿತಿಗಳಾಗಿರುತ್ತವೆ. ಆಚಾರ್ಯರು ಈ ವಿಶಾಲವಾದ ಮನಸ್ಥಿತಿಯನ್ನು ಅದ್ವೆöÊತ ಸಿದ್ಧಾಂತದಲ್ಲಿ ಪ್ರತಿಪಾದಿಸಿರುವುದರಿಂದಲೇ ಅದ್ವೆöÊತಾನುಸಾರಿಗಳಿಗೆ ಶಿವ-ನಾರಾಯಣರಲ್ಲಿ ಭೇದ ವಿಲ್ಲ. ಹುಲುಮಾನವರಾದ ನಮಗೆ ಮೂಲಭೂತವಾಗಿ ತೀಳಿಯಬೇಕಾಗಿರುವ ವಿಷಯವೆಂದರೆ, ದೈವದ ಅಸ್ತಿತ್ವದಲ್ಲಿರುವ ಭೇದವನ್ನು ಮನಸ್ಸಿನಿಂದ ತೆಗೆದು ಹಾಕುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುವುದರಲ್ಲಿ..! ಈ ದೃಷ್ಟಿಯಿಂದ “ಶಿವಾಯ ವಿಷ್ಣುರೂಪಾಯ ಶಿವರೂಪಾಯ ವಿಷ್ಣವೇ| ಶಿವಸ್ಯ ಹೃದಯಂ ವಿಷ್ಣುಃ ವಿಷ್ಣೋಶ್ಚ ಹೃದಯಗ್ಂ ಶಿವಃ || ಯಥಾಂತರA ನ ಪಶ್ಯಾಮಿ ತಥಾಮೇ ಸ್ವಸ್ತಿರಾಯುಷಿ| ಶ್ರೀ ತಥಾಮೇ ಸ್ವಸ್ತಿರಾಯುಷೀತ್ಯೋನ್ನಮ ಇತಿ ||” - ಎಂದು ಅಭೇದ್ಯ ಕಲ್ಪನೆಯ ಸ್ವರೂಪವಾದ ಶಿವ-ನಾರಾಯಣರ ಅಸ್ತಿತ್ವವನ್ನು ಭಕ್ತರಾಗಿ ಸ್ವೀಕರಿಸುವ /ನಮಸ್ಕರಿಸುವ ರೀತಿಯನ್ನು ತೋರಿಸಿಕೊಟ್ಟಿದ್ದು..! ವೇದ ಪ್ರಣೀತವಾದ ಸಿದ್ಧಾಂತದಲ್ಲಿ ಅದ್ವೆöÊತ ತತ್ವವು ಪ್ರತಿಪಾದಿಸಲ್ಪಟ್ಟಿರುವು ದರಿಂದ, ತ್ರಿಮೂರ್ತಿಗಳ ಪ್ರತೀಕವಾಗಿ ಶಿವಲಿಂಗವು ಗೋಚರಿಸಿರುವುದರಿಂದ ತ್ರಿಮೂರ್ತಿಗಳಲ್ಲಿಯ ಯಾವ ಸ್ವರೂಪವನ್ನು ಆಯ್ಕೆ ಮಾಡಿಕೊಂಡು, ಭಕ್ತನು ಲಿಂಗರೂಪದಲ್ಲಿ ಆರಾಧಿಸಿದರೂ, ತತ್ಫಲವು ಲಭಿಸುವುದರಲ್ಲಿ ಸಂಶಯವಿಲ್ಲ.-ವೆAಬುದು ಭಕ್ತನಿಗೆ ಇರಬೇಕಾದ ಸಾಮಾನ್ಯಜ್ಞಾನವೆನಿಸುತ್ತದೆ. ಈಮಾತಿಗೆ ಗೆರಕೆ-ಅಶ್ವತ್ಥವೃಕ್ಷ-ಎಕ್ಕದಗಿಡ-ದರ್ಭೇ-ಗಳಿಗೆ ಇರುವ ಸಮಾನೀಕವಾದ ಗೌರವವು ಸಂದಾಯವಾಗಿರುವ ಮಾತು ಹೊರತಾಗುವುದಿಲ್ಲ..!. ಆನಂತರದಲ್ಲಿ ಶ್ರೇಷ್ಠತೆಯನ್ನು ಮನವರಿಕೆ ಮಾಡುವ ಸಲುವಾಗಿ ಪುರಾಣದ-ದೃಷ್ಟಾಂತಿಕ-ಐತಿಹ್ಯಾತ್ಮಕ-ಪವಾಡ-ವೈಭವೀಕೃತ ರೂಪು-ರೇಷೆಗಳನ್ನೊಳಗೊಂಡ ವಿವರಣೆಗಳು ಬೆಳೆದಿರಬಹುದು.. ದೃಷ್ಟಾಂತಕ್ಕೆ ‘ಬ್ರಹ್ಮಮುರಾರಿ ಸುರಾರ್ಚಿತ ಲಿಂಗA ನಿರ್ಮಲ ಭಾಷಿತ ಶೋಭಿತ ಲಿಂಗಮ್.- ಎಂದೆನ್ನುವ ಬಿಲ್ವಾಷ್ಟಕವು, ಶಿವನಿಗೆ ವೇದಗಳಲ್ಲಿ ಅಭಿಷೇಕಕ್ಕೆ ಬಹುಳವಾಗಿ ಬಳಕೆಗೊಳ್ಳುವ ಶಿವಸಂಕಲ್ಪಗಳು ಮತ್ತು ಅವು ಆದೇಶಿಸುವ ಈ ‘ನಮಕಂ ಚಮಕಂ ಚೈವ ಪುರಷಸೂಕ್ತಂಚ ಯದ್ವಿದುಃ | ಮಹಾದೇವಂಚ ತತ್ತುಲ್ಯಂ ತನ್ಮೇ ಮನಶ್ಶಿವ ಸಂಕಲ್ಪಮಸ್ತು’-ಎAಬ ಉಕ್ತಾö್ಯತ್ಮಕ ಸೂಕ್ತಗಳು ಬಹುಮುಖ್ಯವಾದವು. ಇವುಗಳ ಪಾರಾಯಣವು ಶಿವನಿಗೆ ಸರಿಸಮಾನವಾದ ‘ತುಲ್ಯವನ್ನು’-ಮೌಲ್ಯವನ್ನು ಹೊಂದಿದೆ ಎಂದು. ಇವೆಲ್ಲವನ್ನು ಭಕ್ತನು ಸತ್ಸಂಗದ ಮಾರ್ಗಗಳೆಂದು ಭಾವಿಸಿ-ಅನುಸರಿಸಿ ಜೀವನ್ಮುಕ್ತಿಯನ್ನು ಸಾಧಿಸುವವನಾಗಬೇಕಾಗಿದೆ. ಈ ನಿಟ್ಟಿನಲ್ಲಿ, ಪ್ರೊ|| ಕೆ.ವಿ.ನಾರಾಯಣ ಮೂರ್ತಿಗಳವರ ಪ್ರಯತ್ನವು ಶ್ಲಾಘನೀಯ..! ತಮಗಾದ ಆಧ್ಯಾತ್ಮಿಕ ಅನುಭವ/ಚಿಂತನೆ/ಕಲ್ಪನೆಗಳನ್ನು ಇನ್ನೊಬ್ಬರಿಗೆ/ಸಹೃದಯನಿಗೆ ಆದಷ್ಟು ತ್ವರಿತಗತಿಯಲ್ಲಿ ಹೇಳಿಕೊಳ್ಳುವ ಹಂಬಲಿಕೆಯನ್ನು ತಮ್ಮ ಬರವಣಿಗೆಯ ಮೂಲಕ ತೋರಿಸಿಕೊಂಡಿದ್ದಾರೆ. ಇಂತಹ ಪ್ರಯತ್ನಗಳಲ್ಲಿ ಬರವಣಿಗೆಯು ಸಾಧನವಾದರೂ, ಅಲ್ಲಿ ವ್ಯಕ್ತವಾಗುವ ಭಾವಾವೇಷಕ ರೂಪದಲ್ಲಿ ವ್ಯಕ್ತವಾಗುವ ನಿರೂಪಗಳಿಗೆ ಹೆಚ್ಚು ಮಹತ್ವವನ್ನು ಕೊಡಬೇಕಾಗುತ್ತದೆ. ಏಕೆಂದರೆ ಬರವಣಿಗೆ, ಮಾತುಗಳ ಹಿಂದಿರುವುದು ಅವ್ಯಕ್ತ ಸ್ವರೂಪದಲ್ಲಿರುವುದು ಭಾವವೇ. ಹೀಗಾಗಿ ಮೂರ್ತಿಯವರ ಈ ಪ್ರಯತ್ನವು ತಮ್ಮ ಅಭಿವ್ಯಕ್ತಿಯ ಮೂಲಕ ಇನ್ನೊಂದು ಜೀವಿಯ/ಮನಸ್ಸಿನ-ಭಾವಗಳಿಗೆ ಶಿವ ಪಂಚಾಕ್ಷರಿಯ ಸ್ಪಶÀðವನ್ನು ನೀಡುವ ಹುನ್ನಾರವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಹಾಗೆಂದು ಭಾವಿಸಿದಾಗ ಈ ಕೃತಿಯ ಬೆಲೆಯು ಹೆಚ್ಚಾಗುತ್ತದೆಯೇ ಹೊರತು ಅನ್ಯಮಾತಿಗೆ ಬೆಲೆಯನ್ನು ನೀಡುವುದಿಲ್ಲ. ಈ ದೃಷ್ಟಿಯಿಂದ ಲೇಖಕರ ಪ್ರಯತ್ನವು ಕಾವ್ಯ ಮೀಮಾಂಸೆಯಲ್ಲಿ ಬರುವ ‘ಸರಸ್ವತೀ ತತ್ವ’-ಎಂಬ ಸಿದ್ಧಾಂತದ ಪ್ರತಿರೂಪವನ್ನು ಸಾಧಿಸುತ್ತದೆ. ತನಗನಿಸಿದ/ತನ್ನ ಅಲೋಚನೆಗಳನ್ನು /ಜ್ಞಾನ/ಅರಿವು/ತಿಳುವಳಿಕೆಯನ್ನು ಇನ್ನೊಬ್ಬರಿಗೆ ಹೇಳುವುದರಿಂದ ಉಂಟಾಗುವ ಪರಿಣಾಮವು ಕೇಳುಗನ ಮನೋಭಾವವನ್ನು ಮಂಥನಕ್ಕೆ ಗುರಿಪಡಿಸಿ ಆ ವಿಷಯಾಧಾರಿತವಾದ ಆನಂದವನ್ನು (ಆನಂದA ಬ್ರಹ್ಮೇತಿವ್ಯಜಾನಾತ್) ಹೊಂದುವುದೇ ಆಗಿರುತ್ತದೆ. ಸರಳವಾದ ಮಾತಿನಲ್ಲಿ ಹೇಳುವುದಾದರೆ, ಒಂದು ದೀಪವು ಇನ್ನೊಂದು ದೀಪವನ್ನು ಬೆಳಗಿಸುವಂತೆ ಶ್ರೀ ಕೆ.ವಿ. ನಾರಾಯಣ ಮೂರ್ತಿಗಳವರ ಪ್ರಯತ್ನವೆಂದು ನಾನು ಭಾವಿಸಿದ್ದೇನೆ. ಈ ದೃಷ್ಟಿಯಿಂದ ಅವರು ‘ರುದ್ರಾಕ್ಷಿಯ ಸೃಷ್ಟಿ ಮತ್ತು ಮಹಿಮೆ., ನಮಕ-ಚಮಕಗಳ ಕುರಿತ ವಿವರಣೆ, ತಮ್ಮ ಪ್ರವಾಸಾನುಭವದ ಮೂಲಕ ಜಗತ್ತಿನಲ್ಲಿ ನಡೆಯುವ ವೈವಿಧ್ಯಮಯವಾದ ಶಿವಾರಾಧನೆಯ ಕುರಿತಾದ ಮಾಹಿತಿಯನ್ನು ನೀಡುವ ‘ಜಗತ್ತಿನಲ್ಲೆಲ್ಲಾ ಶಿವೋಪಾಸನೆ’, ಶಿವಲಿಂಗ ಮಹಿಮೆ, ವೇದಾಂತದಲ್ಲಿ ಶಿವ, ವಿಜ್ಞಾನ ಮತ್ತು ಶಿವ, ಶಿವರಾತ್ರಿಯ ಮಹಿಮೆ’ ಇತ್ಯಾದಿಯಾಗಿ ಸು. ೨೮ಕ್ಕೂ ಮೀರಿದ ಸಣ್ಣ-ಪುಟ್ಟ ಲೇಖನಗಳನ್ನು ರಚಿಸಿ, ಕೃತಿ ರೂಪದಲ್ಲಿ ಹೊರ ತರುತ್ತಿದ್ದಾರೆ, ಆದರೂ ಲೇಖಕರಿಗೆ ಹೀಗೆ ಶಿವನನ್ನು ಕುರುತ ಮಹಿಮೆಯನ್ನು ನೀಡುವಲ್ಲಿ ಇನ್ನೂ ಅವರ ಉತ್ಸಾವು ಹೆಚ್ಚುತ್ತದೆಂದೇ ಹೇಳಬೇಕಾಗುತ್ತದೆ. ಅಷ್ಟರಮಟ್ಟಿಗೆ ಶಿವೋಪಾಸನೆಯಲ್ಲಿ ಅವರಿಗಿರುವ ಶ್ರದ್ಧೆ ಮತ್ತು ಆಸಕ್ತಿಯನ್ನು ಕಾಣಬಹುದು. ಈ ಎಲ್ಲ ಆಸಕ್ತಿಗಳ ಹಿನ್ನೆಲೆಯಲ್ಲಿ ಅವರ ಶಿವೋಪಾಸನೆಯ ಕುರಿತ ಶೋಧನೆಯು ಈ ಗ್ರಂಥದಲ್ಲಿ ಗೋಚರಿಸುತ್ತಿದೆ. ಮುಂದೆಯೂ ಅವರ ಈ ಪ್ರಯತ್ನವು ನಿರಂತರ ವಾಗಿ ನಡೆಯಲಿ- ಎಂದು ಶುಭವನ್ನು ಕೋರುತ್ತಾ ವಿರಮಿಸುತ್ತೇನೆ. ವಂದನೆಗಳೊAದಿಗೆ, ೧೨/೩/೨೦೨೦. ಇಂತಿ ವಿದ್ವಜ್ಜನ ವಿಧೇಯ ಡಾ. ಎಸ್. ರಾಮಮೂರ್ತಿ ಶರ್ಮ. ಲಕ್ಕೂರು. ಮೊ: ೯೮೮೬೪೯೧೪೫೩.