ಮುನ್ನುಡಿ ಮತ್ತು ಲೇಖಕರ ಮೊದಲ ಮಾತು
ಈ "ಭ್ರಷ್ಟಾಚಾರದತ್ತ ನಿಷ್ಠರು" ಎಂಬ ಶೀರ್ಷಿಕೆಯ ಪುಸ್ತಕವನ್ನು ನಾನು ಮೂರು ವರ್ಷಗಳ ಮೊದಲೇ ಬರೆಯಲಾರಂಭಿಸಿದ್ದು, ಇದನ್ನು ಈಗಿನ ನಮ್ಮ ದೇಶ ಮತ್ತು ರಾಜ್ಯದ ರಾಜಕೀಯ ಮತ್ತು ಸಾಮಾಜಿಕವಾದ ಪ್ರಸ್ತುತ ವಿದ್ಯಮಾನಗಳೊಂದಿಗೆ ಹೋಲಿಸಿ ಬರೆಯಲಾಗಿದೆ. ಇತ್ತೀಚಿನ ದಿನಗಳಲ್ಲಿ ಶ್ರೀ ಸಾಮಾನ್ಯರಲ್ಲಿ ಅದರಲ್ಲಿಯೂ ವಿಶೇಷವಾಗಿ, ನಗರಕ್ಕೆ ಸೀಮಿತರಾದವರು ಪುಸ್ತಕಗಳನ್ನು ಓದುವ ಮತ್ತು ಕೈ-ಬರಹದಿಂದ ಏನನ್ನಾದರೂ ಬರೆಯುವ ಹವ್ಯಾಸಗಳು ಕಾಲ ಸರಿದಂತೆ ಕಡಿಮೆಯಾಗುತ್ತಿರುವುದರಿಂದ, ಈ ಪುಸ್ತಕದ ಪುಟಗಳ ಪರಿಮಿತಿಯು ಕೇವಲ ಇನ್ನೋರಷ್ಟಕ್ಕೇ ಸೀಮಿತ ಮಾಡಲಾಗಿದೆ.